#### Apple ಒಂದು ವರ್ಷದ ಸೀಮಿತ ವಾರಂಟಿಯ ಸಾರಾಂಶ ಮೂಲ ರಿಟೇಲ್ ಖರೀದಿಯ ದಿನಾಂಕದಿಂದ ಒಂದು ವರ್ಷದವರೆಗೆ, ಒಳಗೊಂಡಿರುವ ಹಾರ್ಡ್‌ವೇರ್ ಉತ್ಪನ್ನ ಮತ್ತು ಆ್ಯಕ್ಸೆಸರಿಗಳಿಗೆ ಸಂಬಂಧಿಸಿದ ವಸ್ತುಗಳಲ್ಲಿನ ದೋಷಗಳು ಮತ್ತು ಕಸುಬುದಾರಿಕೆಗೆ ಸಂಬಂಧಿಸಿದಂತೆ Apple ವಾರಂಟಿ ನೀಡುತ್ತದೆ. ಸಹಜ ಸವಕಳಿಗೆ, ಆಕಸ್ಮಿಕವಾಗಿ ಅಥವಾ ದುರುಪಯೋಗದಿಂದ ಉಂಟಾಗುವ ಹಾನಿಗೆ Apple ವಾರಂಟಿ ನೀಡುವುದಿಲ್ಲ. ಸರ್ವಿಸ್ ಪಡೆದುಕೊಳ್ಳಲು Appleಗೆ ಕರೆ ಮಾಡಿ ಅಥವಾ Apple Storeಗೆ ಭೇಟಿ ನೀಡಿ ಅಥವಾ Appleನ ಅಧಿಕೃತ ಸೇವಾ ಪೂರೈಕೆದಾರರನ್ನು ಭೇಟಿ ಮಾಡಿ—ಲಭ್ಯವಿರುವ ಸರ್ವಿಸ್ ಆಯ್ಕೆಗಳು ಸರ್ವಿಸ್ ಅನ್ನು ವಿನಂತಿಸಿರುವ ದೇಶವನ್ನು ಅವಲಂಬಿಸಿರುತ್ತವೆ ಹಾಗೂ ಮಾರಾಟದ ಮೂಲ ದೇಶಕ್ಕೆ ಸೀಮಿತವಾಗಿರಬಹುದು. ಸ್ಥಳಕ್ಕೆ ಅನುಗುಣವಾಗಿ ಕರೆ ಶುಲ್ಕಗಳು ಮತ್ತು ಅಂತಾರಾಷ್ಟ್ರೀಯ ಷಿಪ್ಪಿಂಗ್ ಶುಲ್ಕಗಳು ಅನ್ವಯಿಸಬಹುದು. ಈ ವಾರಂಟಿಯ ಅಡಿಯಲ್ಲಿ ನೀವು ಮಾನ್ಯವಾದ ಕ್ಲೇಮ್ ಅನ್ನು ಸಲ್ಲಿಸಿದರೆ, Apple ತನ್ನ ವಿವೇಚನೆಗೆ ಒಳಪಟ್ಟು ನಿಮ್ಮ ಹಾರ್ಡ್‌ವೇರ್ ಸಾಧನವನ್ನು ದುರಸ್ತಿ, ಬದಲಾವಣೆ ಅಥವಾ ಮರುಪಾವತಿ ಮಾಡುತ್ತದೆ ಹಾಗೂ ಪಡೆದುಕೊಳ್ಳುವ ಸರ್ವಿಸ್ [apple.com/legal/warranty](https://apple.com/legal/warranty) ಮತ್ತು [support.apple.com](https://support.apple.com/en-in) ಎಂಬಲ್ಲಿ ಉಲ್ಲೇಖಿಸಿರುವ ಸಂಪೂರ್ಣ ನಿಯಮಗಳು ಮತ್ತು ವಿವರವಾದ ಮಾಹಿತಿಗೆ ಒಳಪಟ್ಟಿರುತ್ತದೆ. ವಾರಂಟಿ ಪ್ರಯೋಜನಗಳು ಸ್ಥಳೀಯ ಗ್ರಾಹಕರ ಕಾನೂನುಗಳ ಅಡಿಯಲ್ಲಿ ಒದಗಿಸಲಾದ ಹಕ್ಕುಗಳಿಗೆ ಹೆಚ್ಚುವರಿಯಾಗಿವೆ. ಈ ವಾರಂಟಿಯ ಅಡಿಯಲ್ಲಿ ಕ್ಲೇಮ್ ಮಾಡುವಾಗ ಖರೀದಿ ವಿವರಗಳ ಪುರಾವೆಯನ್ನು ನೀವು ಒದಗಿಸಬೇಕಾಗುತ್ತದೆ. 011626-1 WAR-KN